Category: Kannada Editions

        

Publication Data (ಪ್ರಕಟಣೆ ಮಾಹಿತಿ)

Book Name:  Patanjali Yoga Sutragalu (ಪತಂಜಲಿ ಯೋಗ ಸೂತ್ರಗಳು)

Language: Kannada (ಕನ್ನಡ)

Author: Michael Beloved (ಮೈಕೆಲ್ ಬಿಲವ್ಡ್)

Translator: Arpana Ukkund (ಅರ್ಪನ ಉಕ್ಕುಂದ್)

Publisher: IBH Prakashana, Bangalore (ಐಬಿಎಚ್ ಪ್ರಕಾಶನ, ಬೆಂಗಳೂರು)

Published Date: September 2020

ISBN: 978-81-947291-0-5

Book Size: 8.5 x 5.5 inches

Number of Pages: 474

Category: Philosophy/Spirituality/Yoga (ತತ್ವಶಾಸ್ತ್ರ/ಆಧ್ಯಾತ್ಮಿಕತೆ/ಯೋಗ)

Book Type: Paperback

Book available at: https://www.sapnaonline.com/shop/Author/arpana-ukkund

EmailThis email address is being protected from spambots. You need JavaScript enabled to view it.

Forum:  inSelf Yoga

 

ಕನ್ನಡ ಅನುವಾದಕರ ಜೀವನಚರಿತ್ರೆ:
ಅರ್ಪನ ಉಕ್ಕುಂದ್ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಶಾಲೆಯಲ್ಲಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಯನದ ಅವರ ಮೊದಲ ಭಾಷೆ ಕನ್ನಡ ಆಗಿತ್ತು, ಹಾಗೂ ಔಪಚಾರಿಕ ಶಿಕ್ಷಣ ಇಂಗ್ಲಿಷ್‌ನಲ್ಲಿ ಆಗಿತ್ತು. ಹೀಗಾಗಿ ಅವರು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು ಹಾಗೂ ಬರೆಯಬಲ್ಲರು. ಅರ್ಪನ ಅವರು 1996 ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಇಂಜಿನಿಯರಿಂಗ್ ಮಾಡಿದರು.

1992 ರಲ್ಲಿ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ಶಾರೀರಿಕ ಶಿಕ್ಷಾ ಕೇಂದ್ರವನ್ನು ಸೇರಿ, ಯೋಗ ಆಸನಗಳ ಮೇಲೆ ಒತ್ತು ಕೊಡುವುದರೊಂದಿಗೆ ಸಾಂಪ್ರದಾಯಿಕ ಅಷ್ಟಾಂಗ ಯೋಗವನ್ನು ಕಲಿತರು. 2007 ರಲ್ಲಿ ಅವರು ಸ್ವಾಮಿ ರಾಮ್‌ದೇವ್ (Swami Ramdev) ಅವರ ಯೋಗ ಶಿಬಿರದಲ್ಲಿ ಪಾಲ್ಗೊಂಡು ಪ್ರಾಣಾಯಾಮ ವಿಧಾನಗಳನ್ನು ಕಲಿತರು. ಅವರು ಸ್ವಾಭಾವಿಕವಾಗಿ ಯೋಗ ಮತ್ತು ಧ್ಯಾನದಲ್ಲಿ ಆಸಕ್ತರಾಗಿದ್ದರು ಹಾಗೂ ಧ್ಯಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹುಡುಕುವಾಗ ಮೈಕೆಲ್ ಬಿಲವ್ಡ್ ಅವರ ‘ಮೆಡಿಟೇಶನ್ ಪಿಕ್ಟೋರಿಯಲ್’ (Meditation Pictorial) ಪುಸ್ತಕವನ್ನು ಮತ್ತು ಮೈಕೆಲ್ ಅವರ ವೆಬ್‌ಸೈಟ್ ಅನ್ನು ಕಂಡರು. ವೆಬ್‌ಸೈಟ್ ಮೂಲಕ ಮೈಕೆಲ್ ಬಿಲವ್ಡ್ ಅವರನ್ನು ಸಂಪರ್ಕಿಸಿದ ನಂತರ ಅವರು ಮೈಕೆಲ್ ಅವರಿಂದ ಮೂಲಭೂತ ಕುಂಡಲಿನಿ ಯೋಗ ವಿಧಾನಗಳಲ್ಲಿ ಸೂಚನೆಗಳನ್ನು ಪಡೆದರು. ಪ್ರಸಕ್ತವಾಗಿ ಅವರು ಉಸಿರನ್ನು ತುಂಬುವ ತಂತ್ರಗಳನ್ನು (breath infusion techniques) ಮತ್ತು ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದಾರೆ.

 

Kannada Translator's biography:

Arpana Ukkund was born and brought up in Bangalore. Her first language of study in school and pre-university was Kannada, and formal education was in English. Hence she is fluent in both Kannada and English languages. Arpana did engineering from Bangalore University in the year 1996.

In 1992 she joined the Rashtrotthana Shareerika Shiksha Kendra, Bangalore and learnt the traditional Ashtanga Yoga with stress on yoga asanas. In 2007 she attended Swami Ramdev's yoga camp and learnt the pranayama techniques. She was naturally interested in yoga and meditation and while searching for books related to meditation she found the 'Meditation Pictorial' book of Michael Beloved and his website. After contacting Michael Beloved through the website, Arpana took instructions in basic Kundalini yoga techniques from him. Currently she practices breath infusion techniques and meditation.

 

ವಿವರಣೆ:

ಈ ಪುಸ್ತಕವು ಯೋಗದ ಸಂಪೂರ್ಣ ಪಠ್ಯಕ್ರಮವಾಗಿರುವ ಪತಂಜಲಿ ಯೋಗ ಸೂತ್ರಗಳಿಗೆ ಅನುವಾದ, ವಿಶ್ಲೇಷಣೆ, ಅನ್ವಯ ಹಾಗೂ ಸಂಬಂಧಿತ ರೇಖಾಚಿತ್ರಗಳನ್ನು ಹೊಂದಿದೆ. ಮುಂದುವರಿದ ಯೋಗದ ತಂತ್ರಗಳ ಬಗೆಗಿನ ಈ ಮಾಹಿತಿಯು ಎಲ್ಲರಿಗೂ ಮುಕ್ತವಾಗಿದೆ, ಆದರೆ ಈ ಜೀವನದಲ್ಲಿ ಅಥವಾ ಹಿಂದಿನ ಜೀವನಗಳಲ್ಲಿ ವರ್ಷಗಳವರೆಗೆ ಧ್ಯಾನ ಮಾಡಿದಂಥ ಹಾಗೂ ಈಗ ಯೋಗದ ಅನುಭಾವದ ಪರಾಕಾಷ್ಠೆಯನ್ನು ತಲುಪಲು ಬಯಸುವಂಥ ವ್ಯಕ್ತಿಗಳಿಗೆ ಇದು ವಿಶೇಷ ಆಸಕ್ತಿಯನ್ನು ಹುಟ್ಟಿಸುತ್ತದೆ.

ಯೋಗದ ಅನ್ವಯ ಹಾಗೂ ಸ್ನಾತಕೋತ್ತರ ಅಧ್ಯಯನವೆಂಬುದು ಎಂದಾದರೂ ಇದ್ದಿದ್ದರೆ ಅದು ಪತಂಜಲಿಯವರ ಸೂತ್ರಗಳಾಗಿವೆ. ಅವು ಮಾರ್ಗವನ್ನು ತೋರಿಸುತ್ತವೆ ಹಾಗೂ ಆಸ್ಟ್ರಲ್ ಪ್ರೊಜೆಕ್ಷನ್ ಮತ್ತು ಮೂರನೇ ಕಣ್ಣಿನ ಗ್ರಹಿಕೆಯನ್ನು ಕರಗತ ಮಾಡಿಕೊಂಡವರಿಗೂ ಕೂಡ ತಲುಪುವುದು ಕಷ್ಟಕರವಾದ ಉನ್ನತ ಹಂತಗಳನ್ನು ಬಹಿರಂಗಪಡಿಸುತ್ತವೆ.

ಅಧ್ಯಾಯ ೧ ಭೌತಿಕ ಮಟ್ಟವನ್ನು ಮೀರಿದ ಅನುಭವದ ಸಾಧನೆಯಾದ ಸಮಾಧಿಯ ವಿವರಣೆಯನ್ನು ಹಾಗೂ ವಿನ್ಯಾಸವನ್ನು ನೀಡುತ್ತದೆ. ಅಧ್ಯಾಯ ೨ ಅಭ್ಯಾಸದ ಸಾಧನೆಯನ್ನು ವಿವರಿಸುತ್ತದೆ. ಅಧ್ಯಾಯ ೩ ನಿರಂತರವಾಗಿ ಅಭ್ಯಾಸ ಮಾಡಿದಂಥ ಯೋಗಿಯು ಸಾಧಿಸಬಹುದಾದ ಮಹಿಮೆಯನ್ನು ತೋರಿಸುತ್ತದೆ. ಕೊನೆಯ ಅಧ್ಯಾಯವಾದ ೪, ಸ್ವಯಂನ-ಕೇಂದ್ರಭಾಗವು (ಅಂದರೆ, ಆತ್ಮವು) ತನ್ನ ಗ್ರಹಿಕೆಯ ಸಾಧನಗಳಿಂದ ಸಂಪರ್ಕವನ್ನು ಕಡಿದುಕೊಂಡು ತನ್ನನ್ನು ತಾನು ಅರಿತುಕೊಳ್ಳುವ (ಅಂದರೆ, ತನ್ನ ನಿಜ ಸ್ವರೂಪವನ್ನು ಅರಿತುಕೊಳ್ಳುವ) ಬೇರ್ಪಡಿಸುವಿಕೆಯ ಸಾಧನೆಯನ್ನು ಹೇಗೆ ಮಾಡಬೇಕೆಂಬುದನ್ನು ಯೋಗಿಗೆ ಹೇಳುತ್ತದೆ.

ಕೊನೆಯ ಅಧ್ಯಾಯದಲ್ಲಿ, ಸ್ವಯಂನ-ಕೇಂದ್ರಭಾಗವು ಗ್ರಹಿಕೆಯ ಸಾಧನಗಳಿಂದ ಪ್ರತ್ಯೇಕಿಸಿದ ನಂತರ ಅವುಗಳೊಂದಿಗೆ ಮತ್ತೆ ಹೇಗೆ ಸುರಕ್ಷಿತವಾಗಿ ಒಂದುಗೂಡುವುದು ಎಂಬುವುದರ ಬಗ್ಗೆ ವಿವರಣೆಯಿದೆ.

 

Description:

This is the translation, analysis, application and related diagrams for Patanjali's Yoga Sutras, the complete syllabus for yoga. This information about the techniques of advanced yoga is open to all, but it is of special interest to persons who meditated for years either in this or in a past life, and who now want to get to the culmination of yogic mysticism.

If there ever was a post graduate study and application of yoga, then Patanjali's Sutras are it. They map the path, show the way and reveal the elevated stages which are hard to reach even for those who mastered astral projection and third eye perception.

Chapter 1 gives the description and layout of samadhi transcendence accomplishment. Chapter 2 explains practice accomplishment. Chapter 3 shows the glory which may be attained by a persistent yogi. Chapter 4, the last, tells the yogi how to make the segregation accomplishment where the core-self is disconnected from its perception equipment and realizes itself as itself.

In the last chapter, there is an explanation of how to safely unify again with the perception equipment after the core-self is isolated from these. At the time of publication, there is no other media that goes into so much detail about advanced yoga practice.

 

ಹಿಂಪುಟ:

-- ಅಷ್ಟಾಂಗ ಯೋಗ, ಕುಂಡಲಿನಿ ಯೋಗ, ಕ್ರಿಯಾ ಯೋಗ, ರಾಜ ಯೋಗ, ಬ್ರಹ್ಮ ಯೋಗ, ಹಾಗೂ ನಿಯಮಾಧೀನ ಸ್ವಯಂನ ವಿಯೋಜನೆಯನ್ನು ಉಂಟುಮಾಡುವಂಥ ಪತಂಜಲಿಯವರ ಪ್ರಕ್ರಿಯೆ – ಇವುಗಳ ಪದವಿ ಮಟ್ಟದ ಒಂದು ನಸುನೋಟವನ್ನು ಬಯಸುವಂಥ ಮುಂದುವರಿದ ಧ್ಯಾನಿಗಾಗಿ ಹಾಗೂ ಆರಂಭಿಕರಿಗಾಗಿ.

ಈ ಮಾಹಿತಿಯನ್ನು ಪರಿಶೀಲಿಸಲು ಯಾವುದೇ ಗುರುವಿನ ಅಗತ್ಯವಿಲ್ಲ. ವಾಸ್ತವವಾಗಿ, ಈ ಮಾಹಿತಿಯನ್ನು ಪಡೆದುಕೊಂಡ ನಂತರ ಅರ್ಹ ಶಿಕ್ಷಕರನ್ನು ಹೇಗೆ ಗುರುತಿಸಬೇಕು ಎಂಬುದು ನಿಮಗೆ ತಿಳಿಯುತ್ತದೆ. ನೀವು ಆಧ್ಯಾತ್ಮಿಕ ಗುರುಗಳ ಬಳಿಗೆ ಹೋಗಲು ಬಯಸದಿದ್ದರೆ ಆತ್ಮಶೋಧಕ ಸಾಕ್ಷಾತ್ಕಾರದ ಈ ಪ್ರಕ್ರಿಯೆಯಲ್ಲಿ ನಿಮ್ಮನ್ನು ನೀವು ನೇರವಾಗಿ ತೊಡಗಿಸಿಕೊಳ್ಳಬಹುದು.

ಧ್ಯಾನದಲ್ಲಿ ಏನನ್ನು ನಿರೀಕ್ಷಿಸಬೇಕು ಹಾಗೂ ಯಾವುದಕ್ಕಾಗಿ ಹಂಬಲಿಸಬೇಕು ಎಂಬುದನ್ನು ವಿವರಿಸುವಂಥ ರೇಖಾಚಿತ್ರಗಳನ್ನು ಈ ಮಾಹಿತಿಯಲ್ಲಿ ಸೇರಿಸಲಾಗಿದೆ.

ಯೋಗದ ಉನ್ನತ ಹಂತವು ಇಂದ್ರಿಯ ಶಕ್ತಿಯ ಹಿಂತೆಗೆದುಕೊಳ್ಳುವಿಕೆಯಿಂದ ಪ್ರಾರಂಭವಾಗುತ್ತದೆ. ಅದು ಮನಸ್ಸಿನ ಅತೀಂದ್ರಿಯ ಅಂಗಗಳನ್ನು ಶಾಂತಗೊಳಿಸುವುದಕ್ಕೆ ಹಾಗೂ ಜೀವ ಶಕ್ತಿಯಾದ ಕುಂಡಲಿನಿ ಶಕ್ತಿಯನ್ನು ಶುಧ್ಧೀಕರಿಸುವುದಕ್ಕೆ ಮುಂದುವರಿಯುತ್ತದೆ. ಈ ಸಾಧನೆಗಳು ವ್ಯಕ್ತಿಯ ಶುದ್ಧಗೊಳಿಸಿದ ಗಮನವನ್ನು ಉನ್ನತ ಆಯಾಮಗಳಿಗೆ ಹಾಗೂ ಉನ್ನತ ಶಕ್ತಿಯ ಸಮತಲಗಳಿಗೆ ಕೂಡಿಸುವುದನ್ನು ಉಂಟುಮಾಡುತ್ತವೆ.

ಸ್ವಯಂ ಭೌತಿಕ ಮಟ್ಟದಿಂದ ಹಾಗೂ ಕೆಳಮಟ್ಟದ ಆಸ್ಟ್ರಲ್ ಸಮತಲಗಳಿಂದ ತಪ್ಪಿಸಿಕೊಂಡು ಹೋದಾಗ ಅದು ಉನ್ನತ ಪ್ರಪಂಚಗಳಿಗೆ ಸಲೀಸಾಗಿ ಹಾದುಹೋಗುತ್ತದೆ ಮತ್ತು ದೈವಿಕ ಸಹವಾಸಗಳನ್ನು ಹೊಂದುತ್ತದೆ. ಇವು ಈ ಪುಸ್ತಕ ಬಹಿರಂಗಪಡಿಸುವ ಅಭ್ಯಾಸದ ಕೆಲವು ಅಂಶಗಳಾಗಿವೆ.

 

Backcover:

-- for the advanced meditator and for beginners who desire a glimpse of the graduate level of ashtanga Yoga, kundalini yoga, kriya yoga, raj yoga, brahma yoga, and the Patanjali system of the conditional self’s disintegration.


No guru is required while going through this data. You can have it all to yourself, free of the harassments of an authority. In fact, after getting this information you will know how to recognize the qualified teacher. If you prefer not to deal with spiritual masters, you can directly apply yourself to this system of introspective realization.


This data is laced with diagrams which illustrate what to expect and what to aspire for in meditation.


The high end of yoga begins with sensual energy withdrawal. That progresses into stilling the psychic components of the mind and refining the life force kundalini energy. These achievements lead to linkage of one’s refined attention into higher dimensions and higher energy planes.


When the self breaks away from this level of existence, it transits into higher realms effortlessly and it achieves divine associations. These are the facets of practice which this book reveals.

 

ಲೇಖಕರ ಟಿಪ್ಪಣಿ:

ಪತಂಜಲಿಯವರು ವಿವರಿಸಿದಂತೆ, ಇದು ಯೋಗ ಪ್ರಕ್ರಿಯೆಯ ಪದವಿಯ ಅಧ್ಯಯನವಾಗಿದೆ. ನೀವು ಮುಂದುವರಿದಿಲ್ಲದೇ ಇದ್ದರೂ ನೀವು ಹೆಚ್ಚು ಅರ್ಥಮಾಡಿಕೊಳ್ಳಬಹುದು, ಆದರೆ ಇದರ ಮೂಲತತ್ವವನ್ನು ಸೂಕ್ಷ್ಮ ತಂತ್ರಗಳಿಂದ ಸಾಧಿಸಲಾಗುತ್ತದೆ. ಈ ಅನುವಾದ ಮತ್ತು ವ್ಯಾಖ್ಯಾನದಲ್ಲಿ ನಾನು ಹೆಚ್ಚಿನ ಕಾಳಜಿಯನ್ನು ವಹಿಸಿದ್ದೇನೆ ಹಾಗೂ ಪ್ರತಿ ಶ್ಲೋಕಕ್ಕೂ ಅನ್ವಯವನ್ನು ಸೇರಿಸಿದ್ದೇನೆ. ಪಠ್ಯದುದ್ದಕ್ಕೂ ರೇಖಾಚಿತ್ರಗಳಿವೆ.

ಪತಂಜಲಿಯವರು ನಮಗೆ ಮನಸ್ಸಿನ ಸಾಮಾನ್ಯ ಕಾರ್ಯಾಚರಣಾ ಪ್ರಕ್ರಿಯೆಗಳನ್ನು ನಿಲ್ಲಿಸುವಂತೆ ಹೇಳಿದರು. ಇದನ್ನು ಮಾಡಲು ಮನಸ್ಸಿನ ವಿವಿಧ ಭಾಗಗಳ ಕಾರ್ಯಾಚರಣೆಯ ವಿವರವಾದ ವೀಕ್ಷಣೆಯು ಬೇಕಾಗುತ್ತದೆ. ಪತಂಜಲಿಯವರು ನೀಡಿರುವ ಪ್ರಜ್ಞೆಯ ವಿನ್ಯಾಸದ ತಿಳುವಳಿಕೆಯೊಂದಿಗೆ ವ್ಯಕ್ತಿಯು ವಿವಿಧ ಮಾನಸಿಕ ಅಂಗಗಳನ್ನು ಗುರುತಿಸಬಹುದು ಹಾಗೂ ಅವುಗಳ ಪ್ರಾಪಂಚಿಕ ಪಾಲ್ಗೊಳ್ಳುವಿಕೆಗಳನ್ನು ಹೇಗೆ ಕಡಿಮೆ ಮಾಡುವುದು ಎಂಬುದನ್ನು ಕಲಿತುಕೊಳ್ಳಬಹುದು.

ಮಾನಸಿಕ ಅಂಗಗಳನ್ನು ಉನ್ನತೀಕರಿಸುವುದು ಹಾಗೂ ಉನ್ನತ ಆಯಾಮಗಳ ಒಳಗೆ ಇಣುಕಿ ನೋಡುವುದು ಸಾಧನೆಯಾಗಿದೆ. ಮೊದಲಿಗೆ ಮಾನಸಿಕ ಅಂಗಗಳನ್ನು ವಿಂಗಡಿಸಬೇಕು, ಅವುಗಳ ವಿನಾಶಕಾರಿ ಕಾರ್ಯಾಚರಣೆಗಳನ್ನು ಕಂಡುಕೊಳ್ಳಬೇಕು ಹಾಗೂ ಅವುಗಳನ್ನು ತಗ್ಗಿಸಬೇಕು. ನಂತರ ಮಾನಸಿಕ ಅಂಗಗಳ ಪ್ರಭಾವವನ್ನು ತಪ್ಪಿಸುವುದಕ್ಕಾಗಿ ಸ್ವಯಂನ-ಕೇಂದ್ರಭಾಗವನ್ನು (ಅಂದರೆ, ಆತ್ಮವನ್ನು) ಮಾನಸಿಕ ಅಂಗಗಳಿಂದ ಬೇರ್ಪಡಿಸಬೇಕು. ಆ ಅತೀಂದ್ರಿಯ ಕ್ರಿಯೆಯು ಸ್ವಯಂನ ಸಮಗ್ರತೆಯನ್ನು ಪುನಃಸ್ಥಾಪಿಸುತ್ತದೆ. ನಂತರ ಹೆಚ್ಚು ಚೈತನ್ಯ ತುಂಬಿದ ಮಾನಸಿಕ ಅಂಗಗಳೊಂದಿಗೆ ಸ್ವಯಂನ-ಕೇಂದ್ರಭಾಗದ ಸಂಪರ್ಕವನ್ನು ಪುನಃ ಸ್ಥಾಪಿಸಿಕೊಳ್ಳಬೇಕು.

 

Author's Comment:

This is the graduate study of the process of yoga as described by Patanjali. You can understand much even if you are not advanced but the essence of this would be accomplished by subtle techniques. I took great care in this translation and commentary and added an application to each verse. There are diagrams throughout the text.

Patanjali asked us to stop the ordinary operational procedures of the mind. To do this requires detailed observation of the maneuvers of the various part of mind. With an understanding of the layout of consciousness as given by Patanjali, one can distinguish the various psychic organs and learn how to curtail their mundane involvements.

The accomplishment is to upgrade the psychic organs and to peer into higher dimensions. At first one has to sort the organs, determine their destructive operations and curtail those. Then one has to segregate the core-self from the organs so as to disempowered them. That mystic action restores the self’s integrity. One must also assume a set of highly energized psychic organs.