Astral Projection Front Cover Final    Astral Projection Back Cover Final

Publication Data (ಪ್ರಕಟಣೆ ಮಾಹಿತಿ)

Book Name:  Astral Projection (ಆಸ್ಟ್ರಲ್ ಪ್ರೊಜೆಕ್ಷನ್)

Language: Kannada (ಕನ್ನಡ)

Author: Michael Beloved (ಮೈಕೆಲ್ ಬಿಲವ್ಡ್)

Translator: Arpana Ukkund (ಅರ್ಪನ ಉಕ್ಕುಂದ್)

Publisher: IBH Prakashana, Bangalore (ಐಬಿಎಚ್ ಪ್ರಕಾಶನ, ಬೆಂಗಳೂರು)

Published Date: November 2017

ISBN: 9789352815036

Book Size: 8.5 x 5.5 inches

Category: Body, Mind & Spirit / Religion and Spirituality / Astral Travel / Out-of-body experience

(ದೇಹ, ಮನಸ್ಸು ಮತ್ತು ಆತ್ಮ / ಧರ್ಮ ಮತ್ತು ಆಧ್ಯಾತ್ಮಿಕತೆ / ಆಸ್ಟ್ರಲ್ ಪ್ರಯಾಣ / ದೇಹದಿಂದ ಹೊರಗಿರುವ ಅನುಭವ)

Book Type: Paperback

Book available at: https://www.sapnaonline.com/shop/Author/arpana-ukkund

EmailThis email address is being protected from spambots. You need JavaScript enabled to view it.

Forum:  inSelf Yoga

 

ಕನ್ನಡ ಅನುವಾದಕರ ಜೀವನಚರಿತ್ರೆ:
ಅರ್ಪನ ಉಕ್ಕುಂದ್ ಅವರು ಹುಟ್ಟಿ ಬೆಳೆದದ್ದು ಭಾರತದ ಬೆಂಗಳೂರಿನಲ್ಲಿ. ಶಾಲೆಯಲ್ಲಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಯನದ ಅವರ ಮೊದಲ ಭಾಷೆ ಕನ್ನಡ ಆಗಿತ್ತು, ಹಾಗೂ ಔಪಚಾರಿಕ ಶಿಕ್ಷಣ ಇಂಗ್ಲಿಷ್‌ನಲ್ಲಿ ಆಗಿತ್ತು. ಹೀಗಾಗಿ ಅವರು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು ಹಾಗೂ ಬರೆಯಬಲ್ಲರು. ಅರ್ಪನ ಅವರು 1996 ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಇಂಜಿನಿಯರಿಂಗ್ ಮಾಡಿದರು.

1992 ರಲ್ಲಿ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ಶಾರೀರಿಕ ಶಿಕ್ಷಾ ಕೇಂದ್ರವನ್ನು ಸೇರಿ, ಯೋಗ ಆಸನಗಳ ಮೇಲೆ ಒತ್ತು ಕೊಡುವುದರೊಂದಿಗೆ ಸಾಂಪ್ರದಾಯಿಕ ಅಷ್ಟಾಂಗ ಯೋಗವನ್ನು ಕಲಿತರು. 2007 ರಲ್ಲಿ ಅವರು ಸ್ವಾಮಿ ರಾಮ್‌ದೇವ್ (Swami Ramdev) ಅವರ ಯೋಗ ಶಿಬಿರದಲ್ಲಿ ಪಾಲ್ಗೊಂಡು ಪ್ರಾಣಾಯಾಮ ವಿಧಾನಗಳನ್ನು ಕಲಿತರು. ಅವರು ಸ್ವಾಭಾವಿಕವಾಗಿ ಯೋಗ ಮತ್ತು ಧ್ಯಾನದಲ್ಲಿ ಆಸಕ್ತರಾಗಿದ್ದರು ಹಾಗೂ ಧ್ಯಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹುಡುಕುವಾಗ ಮೈಕೆಲ್ ಬಿಲವ್ಡ್ ಅವರ ‘ಮೆಡಿಟೇಶನ್ ಪಿಕ್ಟೋರಿಯಲ್’ (Meditation Pictorial) ಪುಸ್ತಕವನ್ನು ಮತ್ತು ಮೈಕೆಲ್ ಅವರ ವೆಬ್‌ಸೈಟ್ ಅನ್ನು ಕಂಡರು. ವೆಬ್‌ಸೈಟ್ ಮೂಲಕ ಮೈಕೆಲ್ ಬಿಲವ್ಡ್ ಅವರನ್ನು ಸಂಪರ್ಕಿಸಿದ ನಂತರ ಅವರು ಮೈಕೆಲ್ ಅವರಿಂದ ಮೂಲಭೂತ ಕುಂಡಲಿನಿ ಯೋಗ ವಿಧಾನಗಳಲ್ಲಿ ಸೂಚನೆಗಳನ್ನು ಪಡೆದರು. ಪ್ರಸಕ್ತವಾಗಿ ಅವರು ಉಸಿರನ್ನು ತುಂಬುವ ತಂತ್ರಗಳನ್ನು (breath infusion techniques) ಮತ್ತು ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದಾರೆ.

 

Kannada Translator's biography:

Arpana Ukkund was born and brought up in Bangalore, India. Her first language of study in school and pre-university was Kannada, and formal education was in English. Hence she is fluent in both Kannada and English languages. Arpana did engineering from Bangalore University in the year 1996.

In 1992 she joined the Rashtrotthana Shareerika Shiksha Kendra, Bangalore and learnt the traditional Ashtanga Yoga with stress on yoga asanas. In 2007 she attended Swami Ramdev's yoga camp and learnt the pranayama techniques. She was naturally interested in yoga and meditation and while searching for books related to meditation she found the 'Meditation Pictorial' book of Michael Beloved and his website. After contacting Michael Beloved through the website, Arpana took instructions in basic Kundalini yoga techniques from him. Currently she practices breath infusion techniques and meditation.

 

ವಿವರಣೆ:

ಮರುಜನ್ಮ ಪಡೆಯುವಿಕೆ, ಸೂಕ್ಷ್ಮ ಶರೀರ, ಆಸ್ಟ್ರಲ್ ಪ್ರೊಜೆಕ್ಷನ್, ಸ್ವಚ್ಛವಾದ ಕನಸು, ನಿದ್ರಾ ಪಾರ್ಶ್ವವಾಯು, ಆಯಾಮದ ಜಿಗಿತ, ಸ್ವರ್ಗಕ್ಕೆ ಸ್ಥಳಾಂತರಿಸುವಿಕೆ, ಮತ್ತು ಅಲೌಕಿಕ ಸ್ಥಳಗಳಿಗೆ ಪ್ರಯಾಣ, ಇವುಗಳ ಮೇಲೆ ಒಂದು ಬರಹ.

ಆಸ್ಟ್ರಲ್ ಪ್ರೊಜೆಕ್ಷನ್ ಸಂಬಂಧಪಟ್ಟ ವ್ಯಕ್ತಿಯ ಜಾಗೃತ ಅರಿವನ್ನು ಅವಲಂಬಿಸಿಲ್ಲದ ಒಂದು ನೈಸರ್ಗಿಕ ಅತೀಂದ್ರಿಯ ಕಾರ್ಯವಾಗಿದೆ. ದಿನದ ಮೇಲೆ ದಿನ ಸಾಮಾನ್ಯವಾಗಿ ಪ್ರತಿ ಇಪ್ಪತ್ನಾಲ್ಕು ಗಂಟೆಗಳ ಒಳಗೆ ಒಮ್ಮೆ ಒಂದು ಪ್ರತ್ಯೇಕವಾದ ಆತ್ಮವನ್ನು ಅದರ ಭೌತಿಕ ದೇಹದಿಂದ ಸ್ಥಳಾಂತರಗೊಳಿಸಲಾಗುತ್ತದೆ, ಆದರೆ ಅದು ತನ್ನನ್ನು ಪ್ರತ್ಯೇಕಿಸಲಾಯಿತು ಎಂಬ ಅರಿವಿಲ್ಲದ ಒಂದು ಮಂಪರಿನ ಸ್ಥಿತಿಯಲ್ಲಿರುವಾಗ ಸಾಮಾನ್ಯವಾಗಿ ಇದನ್ನು ಮಾಡಲಾಗುತ್ತದೆ. ಇದು ನಂತರ ಒಂದು ಭೌತಿಕ ದೇಹವಾಗಿ ಮತ್ತೆ ಜಾಗೃತವಾಗುತ್ತದೆ, ಮತ್ತು ತನ್ನ ಚಟುವಟಿಕೆಗಳನ್ನು ಪುನರಾರಂಭಿಸಲು ಕಾರ್ಯಮಗ್ನವಾಗುತ್ತದೆ.

ಆಸ್ಟ್ರಲ್ ಪ್ರೊಜೆಕ್ಷನ್ ನಿಜವಾಗಿಯೂ ಆ ಸ್ಥಳಾಂತರಿಸಿದ ಮನಸ್ಸಿನ ವೀಕ್ಷಣೆಯಾಗಿದೆ. ಇದರ ಬಗ್ಗೆ ಹೇಗೆ ಜಾಗೃತವಾಗುವುದು ಎಂಬ ಮಾಹಿತಿಯನ್ನು ಈ ಬರಹದಲ್ಲಿ ಬಹಿರಂಗಪಡಿಸಲಾಗಿದೆ.

 

Description:
A paper on reincarnation, subtle body, astral projection, lucid dreaming, sleep paralysis, dimensional hoping, translation to paradise and transit to supernatural places.

Astral Projection is a natural psychic function which is not reliant on the conscious awareness of the person concerned. Day after day usually once within every twenty-four hours, an individual spirit is displaced from its physical body but this is usually done while it is in a condition of stupor, where it is not aware that it was separated. It then becomes conscious again as a physical body and gets busy to restart its activities.

Astral projection is really the observation of that displaced psyche. Information of how to become conscious of this is divulged in this paper.

 

ಹಿಂಪುಟ:
ಆಸ್ಟ್ರಲ್ ಪ್ರೊಜೆಕ್ಷನ್ ಮಾನವನು ತಾನು ಎಂದು ತಿಳಿದಿರುವ ದೈಹಿಕ ವ್ಯವಸ್ಥೆಯ ಸಾವಿನಾಚೆಗೆ ಬದುಕುಳಿಯುವ ಸ್ವಯಂ-ಭರವಸೆಯನ್ನು ಕುರಿತಾಗಿದೆ. ಇದು ಮಾನಸಿಕ ಶಕ್ತಿಗಳ ನಿರಂತರತೆ ಹಾಗೂ ಶಾಶ್ವತತೆಯ ಬಗ್ಗೆ ಇತರ ಋಜುವಾತಿನ ಅಗತ್ಯವಿಲ್ಲದ ಸ್ವಯಂ-ಸಾಕ್ಷಿಯಾಗಿದೆ.

ಪ್ರತಿ ಬಾರಿಯು ಭೌತಿಕ ದೇಹವು ನಿದ್ರಿಸುವಾಗ ಮಾನಸಿಕ ಸ್ವಭಾವವು ದೈಹಿಕ ರೂಪದಿಂದ ಪ್ರತ್ಯೇಕಿಸುತ್ತದೆ ಮತ್ತು ಆಸ್ಟ್ರಲ್ ಪ್ರಪಂಚದ ಒಂದು ಸೂಕ್ಷ್ಮ ಆಯಾಮದ ಒಳಗೆ ಪ್ರಯಾಣವನ್ನು ಕೈಗೊಳ್ಳುತ್ತದೆ. ಇದು ನಂತರ ದೈಹಿಕ ಹೊರಕವಚದ ಒಳಗೆ ಹಿಂದಿರುಗುತ್ತದೆ, ಮತ್ತು ಭೌತಿಕ ಇತಿಹಾಸದಲ್ಲಿ ಅದರ ಪಾತ್ರವನ್ನು ಮುಂದುವರಿಸಲು ಮೇಲೇಳುತ್ತದೆ. ಪ್ರಕೃತಿಯು ಭೌತಿಕ ದೇಹದ ಬದುಕು ಹಾಗೂ ಸಾವನ್ನು ನಡೆಸುವಂತೆಯೇ ಅಲೌಕಿಕ ಪ್ರಕೃತಿಯು ಈ ಕಾರ್ಯಾಚರಣೆಗಳನ್ನು ನಡೆಸುತ್ತದೆ.

ಸಾಕ್ಷಿ ಆಂತರಿಕವಾಗಿದೆ, ಆದರೆ ಲಕ್ಷ್ಯವಿಡುವ ಕನಸಿನ ಅರಿವಿನ ಮೂಲಕ, ಮತ್ತು ಭೌತಿಕ ಜಾಗೃತಿಯಿಂದ ನಿದ್ರೆಯ ಮಂಪರಿಗೆ ಪ್ರಜ್ಞೆಯಲ್ಲಿನ ಬದಲಾವಣೆಗಳನ್ನು ಗಮನವಿಟ್ಟು ನೋಡುವ ಮೂಲಕ, ಹಾಗೂ ಕನಸಿನಿಂದ ಭೌತಿಕ ಎಚ್ಚರವಾಗುವಿಕೆಗೆ ಅಸ್ತಿತ್ವದ ಹಾದು ಹೋಗುವಿಕೆಯನ್ನು ಗಮನವಿಟ್ಟು ನೋಡುವ ಮೂಲಕ ಇದನ್ನು ಮನಸ್ಸಿನಿಂದ ಹೊರಗೆ ಪರಿಶೀಲಿಸಬಹುದಾಗಿದೆ.

 

Backcover:
Astral projection is about self assurance of survival beyond the death of the physical system which a human being came to know as itself. It is the self-evidence that requires no other verification about the continuation and perpetuity of the psychological energies.

Every time the physical body sleeps, the psychological character separates from the physical form, and ventures into a subtle dimension, the astral world. It then returns into the physical casing and rises to continue its part in physical history. Supernatural nature conducts these operations, just as nature conducts the life and death of the physical body.

The evidence is subjective but it can be objectively verified by attentive dream awareness and observations of the shifts in conscousness from physical awareness to the stupor of sleep, and the existential transit from dreaming to physical waking.