Nidra Parswavayu Front cover Final     Nidra Parswavayu Back Cover Final

Publication Data (ಪ್ರಕಟಣೆ ಮಾಹಿತಿ)

Book Name:  Nidra Parswavayu (ನಿದ್ರಾ ಪಾರ್ಶ್ವವಾಯು)

Language: Kannada (ಕನ್ನಡ)

Author: Michael Beloved (ಮೈಕೆಲ್ ಬಿಲವ್ಡ್)

Translator: Arpana Ukkund (ಅರ್ಪನ ಉಕ್ಕುಂದ್)

Publisher: IBH Prakashana, Bangalore (ಐಬಿಎಚ್ ಪ್ರಕಾಶನ, ಬೆಂಗಳೂರು)

Published Date: November 2017

ISBN:  9789352816859

Book Size: 8.5 x 5.5 inches

Category: Body, Mind & Spirit / Dreams (ದೇಹ, ಮನಸ್ಸು ಮತ್ತು ಆತ್ಮ / ಕನಸುಗಳು)

Book Type: Paperback

Book available at: https://www.sapnaonline.com/shop/Author/arpana-ukkund

Email:  This email address is being protected from spambots. You need JavaScript enabled to view it. 

Forum:  inSelf Yoga

 

ಕನ್ನಡ ಅನುವಾದಕರ ಜೀವನಚರಿತ್ರೆ:
ಅರ್ಪನ ಉಕ್ಕುಂದ್ ಅವರು ಹುಟ್ಟಿ ಬೆಳೆದದ್ದು ಭಾರತದ ಬೆಂಗಳೂರಿನಲ್ಲಿ. ಶಾಲೆಯಲ್ಲಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಯನದ ಅವರ ಮೊದಲ ಭಾಷೆ ಕನ್ನಡ ಆಗಿತ್ತು, ಹಾಗೂ ಔಪಚಾರಿಕ ಶಿಕ್ಷಣ ಇಂಗ್ಲಿಷ್‌ನಲ್ಲಿ ಆಗಿತ್ತು. ಹೀಗಾಗಿ ಅವರು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು ಹಾಗೂ ಬರೆಯಬಲ್ಲರು. ಅರ್ಪನ ಅವರು 1996 ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಇಂಜಿನಿಯರಿಂಗ್ ಮಾಡಿದರು.

1992 ರಲ್ಲಿ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ಶಾರೀರಿಕ ಶಿಕ್ಷಾ ಕೇಂದ್ರವನ್ನು ಸೇರಿ, ಯೋಗ ಆಸನಗಳ ಮೇಲೆ ಒತ್ತು ಕೊಡುವುದರೊಂದಿಗೆ ಸಾಂಪ್ರದಾಯಿಕ ಅಷ್ಟಾಂಗ ಯೋಗವನ್ನು ಕಲಿತರು. 2007 ರಲ್ಲಿ ಅವರು ಸ್ವಾಮಿ ರಾಮ್‌ದೇವ್ (Swami Ramdev) ಅವರ ಯೋಗ ಶಿಬಿರದಲ್ಲಿ ಪಾಲ್ಗೊಂಡು ಪ್ರಾಣಾಯಾಮ ವಿಧಾನಗಳನ್ನು ಕಲಿತರು. ಅವರು ಸ್ವಾಭಾವಿಕವಾಗಿ ಯೋಗ ಮತ್ತು ಧ್ಯಾನದಲ್ಲಿ ಆಸಕ್ತರಾಗಿದ್ದರು ಹಾಗೂ ಧ್ಯಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹುಡುಕುವಾಗ ಮೈಕೆಲ್ ಬಿಲವ್ಡ್ ಅವರ ‘ಮೆಡಿಟೇಶನ್ ಪಿಕ್ಟೋರಿಯಲ್’ (Meditation Pictorial) ಪುಸ್ತಕವನ್ನು ಮತ್ತು ಮೈಕೆಲ್ ಅವರ ವೆಬ್‌ಸೈಟ್ ಅನ್ನು ಕಂಡರು. ವೆಬ್‌ಸೈಟ್ ಮೂಲಕ ಮೈಕೆಲ್ ಬಿಲವ್ಡ್ ಅವರನ್ನು ಸಂಪರ್ಕಿಸಿದ ನಂತರ ಅವರು ಮೈಕೆಲ್ ಅವರಿಂದ ಮೂಲಭೂತ ಕುಂಡಲಿನಿ ಯೋಗ ವಿಧಾನಗಳಲ್ಲಿ ಸೂಚನೆಗಳನ್ನು ಪಡೆದರು. ಪ್ರಸಕ್ತವಾಗಿ ಅವರು ಉಸಿರನ್ನು ತುಂಬುವ ತಂತ್ರಗಳನ್ನು (breath infusion techniques) ಮತ್ತು ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದಾರೆ.

 

Kannada Translator's biography:

Arpana Ukkund was born and brought up in Bangalore, India. Her first language of study in school and pre-university was Kannada, and formal education was in English. Hence she is fluent in both Kannada and English languages. Arpana did engineering from Bangalore University in the year 1996.

In 1992 she joined the Rashtrotthana Shareerika Shiksha Kendra, Bangalore and learnt the traditional Ashtanga Yoga with stress on yoga asanas. In 2007 she attended Swami Ramdev's yoga camp and learnt the pranayama techniques. She was naturally interested in yoga and meditation and while searching for books related to meditation she found the 'Meditation Pictorial' book of Michael Beloved and his website. After contacting Michael Beloved through the website, Arpana took instructions in basic Kundalini yoga techniques from him. Currently she practices breath infusion techniques and meditation.

 

ವಿವರಣೆ:
ನಿದ್ರಾ ಪಾರ್ಶ್ವವಾಯುವಿನ ಮಾನಸಿಕ ಕಾರಣ, ಅದನ್ನು ನಿಭಾಯಿಸುವುದು ಹೇಗೆ ಮತ್ತು ಘಟನೆಗಳನ್ನು ಕಡಿಮೆಗೊಳಿಸುವುದು ಹೇಗೆ ಎಂಬುದರ ಮೇಲೆ ಒಂದು ಕಿರು ವಿಷಯಕ್ಕೆ ಸೀಮಿತ ಬರಹ. ನಿದ್ರಾ ಪಾರ್ಶ್ವವಾಯು ಮತ್ತು ಆಸ್ಟ್ರಲ್ ಪ್ರೊಜೆಕ್ಷನ್ ನಡುವಿನ ಸಂಬಂಧವನ್ನು ವಿವರಿಸಲಾಗಿದೆ. ನಿದ್ರಾ ಪಾರ್ಶ್ವವಾಯು ಘಟನೆಗಳನ್ನು ಕಡಿಮೆಗೊಳಿಸುವ, ಕನಸಿನ ಸ್ಮರಣ ಶಕ್ತಿಯನ್ನು ಹೆಚ್ಚಿಸುವ ಮತ್ತು ಆಸ್ಟ್ರಲ್ ಪ್ರೊಜೆಕ್ಷನ್‌ಗಳ ಸಮಯದಲ್ಲಿ ವಸ್ತುನಿಷ್ಠವಾಗಿ ಜಾಗೃತವಾಗಿರುವ ವಿಧಾನಗಳನ್ನು ವಿವರಿಸಲಾಗಿದೆ. ಈ ಬರಹದ ಅತ್ಯಂತ ಬಹಿರಂಗಪಡಿಸಿದ ಅಂಶವೆಂದರೆ, ತಮ್ಮ ನಿದ್ರಾ ಪಾರ್ಶ್ವವಾಯು ಸ್ಥಿತಿಗಳ ಬಗ್ಗೆ ಹಾಗೂ ಇವುಗಳನ್ನು ಹತೋಟಿಯಲ್ಲಿಡಲು, ಇವುಗಳಿಂದ ಹೊರಬರಲು, ಮತ್ತು ಒಂದು ಘಟನೆಯು ಇಲ್ಲದೆ ಅವರ ಮಾನಸಿಕ ಸ್ವಯಂ ಭೌತಿಕ ದೇಹದಿಂದ ಪ್ರತ್ಯೇಕಿಸುವುದಕ್ಕೆ ಹಾಗೂ ಭೌತಿಕ ದೇಹದಲ್ಲಿ ಒಂದುಗೂಡುವುದಕ್ಕೆ ಅವರು ಏನು ಮಾಡಿದರು ಎಂಬುದರ ಬಗ್ಗೆ ಲೇಖಕರ ವಿವರಣೆಯಾಗಿದೆ.

 

Description:

A short to-the-point paper on the psychic cause of sleep paralysis, how to manage it and decrease incidences. The relationship between sleep paralysis and astral projection is explained. The methods of decreasing the incidences of sleep paralysis, increasing dream recall and being objectively conscious during astral projections is described. The most revealing part of this paper is the author’s description of his sleep paralysis states and what he did to contain these, get out of these and cause his psychic self to separated from and to fuse into the physical body without an incidence.

 

ಹಿಂಪುಟ:
ಸರಳ ಪದಗಳಲ್ಲಿ ಬಾಲ್ಯದಿಂದಲೂ ಇದರ ಕುರಿತು ತಮ್ಮ ಅನುಭವವನ್ನು ನೀಡುತ್ತಾ ಮೈಕೆಲ್ ಮಾನವನ ಮನಸ್ಸನ್ನು ಕೂಲಂಕಷವಾಗಿ ಪರಿಶೀಲಿಸಿ, ಯಾವುದು ನಿದ್ರಾ ಪಾರ್ಶ್ವವಾಯುವನ್ನು ನಿಯಂತ್ರಿಸುತ್ತದೆ ಮತ್ತು ಇದರ ಘಟನೆಗಳನ್ನು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ಬಹಿರಂಗಪಡಿಸಿದ್ದಾರೆ.


ಯಾವುದೇ ಜಾದೂವಿನ ಪರಿಹಾರೋಪಾಯಗಳಿಲ್ಲ! “ನೀವು-ಎಲ್ಲವನ್ನೂ-ನಿಯಂತ್ರಿಸಬಹುದು” ಎಂಬ ಯಾವುದೇ ಹಿತಾನುಭವದ ಪದಕಂತೆಗಳು ಇಲ್ಲ.


ಅಸ್ತಿತ್ವವಾದದ ಸ್ಥಿತಿಗಳ ಬಗ್ಗೆ ನಿಮ್ಮ ಸೀಮಿತ ನಿಯಂತ್ರಣವನ್ನು ಹೆಚ್ಚಿಸಲು ಕಾರ್ಯಮಾಡಿ. ಸಕಾರಾತ್ಮಕ ಅನುಭವಗಳನ್ನು ಹೆಚ್ಚಿಸಲು ನೀವು ಏನು ಮಾಡಬಹುದು ಎಂಬುದರ ಬಗ್ಗೆ ಸುಳಿವು ಪಡೆಯಿರಿ.


ಭೌತಿಕ ದೇಹದಿಂದ ಪ್ರತ್ಯೇಕವಾಗಿರುವ ಆತ್ಮದ ಸಾಕ್ಷಾತ್ಕಾರದ ಬಗ್ಗೆ ಈ ಬರಹದಲ್ಲಿ ಒಂದು ಅಮೂಲ್ಯವಾದ ಸುಳಿವು ಇದೆ. ನಿಮ್ಮ ನಿದ್ರೆಯ ನಾಟಕವನ್ನು ಆಧ್ಯಾತ್ಮಿಕ ವಿಶ್ವಾಸದ ಮೂಲವನ್ನಾಗಿ ಬದಲಾಯಿಸಿ. ನಿಮ್ಮ ವ್ಯಕ್ತಿತ್ವವನ್ನು ಭೌತಿಕ ದೇಹದ ಹೊರಗೆ ಅಸ್ತಿತ್ವದಲ್ಲಿರುವ ಮಾನಸಿಕ ವಾಸ್ತವತೆಯಂತೆ ಅರ್ಥಮಾಡಿಕೊಳ್ಳಲು ಇದನ್ನು ಬಳಸಿ.

 

Back Cover:

 In simple terms using my experiences since childhood, I dissect the psyche of the human being, showing what controls sleep paralysis and how to decrease the incidences of it.

 No magic bullets! No, “You-can-control-everything” feel-good phrases!

Act to increase your limited control of existential states. Get hints of what you may do to increase positive experiences during dream and semi-conscious conditions.

 There is a valuable hint in this paper about the realization of the self apart from the material body. Turn your sleep drama into a source of spiritual confidence. Use it to fathom your personality as a psychological reality existing apart from the physical body.